ಕಾರ್ಗಿಲ್ ಕದನವೀರರು -1
ನಾಗಾಲ್ಯಾಂಡ್ ನ ಕೊಹಿಮಾದಲ್ಲಿ ಅರ್ಧ ಶತಮಾನದ ಹಿಂದೆ ಸ್ಥಾಪಿಸಲಾದ ಒಂದು ಪ್ರತಿಮೆ ಇದೆ. ಯುದ್ಧದಲ್ಲಿ ಹೋರಾಡಿ ಕೆಳಗೆ ಕುಸಿಯುತ್ತಿರುವ ಯೋಧನೊಬ್ಬನ ಪ್ರತಿಮೆ ಅದು. ಅದರ ಕೆಳಗೆ ಒಂದು ವಾಕ್ಯ ಬರೆದಿದೆ "ನೀವು ಮನೆಗೆ ಹೋದಾಗ ಮನೆಯಲ್ಲಿದ್ದವರಿಗೆ ಹೇಳಿ, ನಿಮ್ಮ ನಾಳೆಗಳಿಗಾಗಿ ನಾವು ನಮ್ಮ ಈ ದಿನವನ್ನು ತ್ಯಾಗ ಮಾಡಿದ್ದೇವೆ."
ಈ ಕೆತ್ತನೆ ಈಗ ಮಳೆಗೆ ತೊಯ್ದು ಚಳಿ, ಗಾಳಿಗೆ ತುಯ್ದು ಮಸುಕಾಗಿದೆ. ಬರೆದ ಅಕ್ಷರಗಳು ಅಳಿಸಿ ಹೋದರು ಯೋಧರ ವೀರಗಾಥೆ ಇಂದಿಗೂ ಇದೇ ಮಾತನ್ನು ಮತ್ತೆ ಮತ್ತೆ ನೆನಪಿಸುತ್ತದೆ. ಕಾರ್ಗಿಲ್ ಕದನಭೂಮಿಯಿಂದ ಹೆಣವಾಗಿ ಹುಟ್ಟೂರಿಗೆ ಪೆಟ್ಟಿಗೆಯಲ್ಲಿ ಬಂದ ಪ್ರತಿಯೊಬ್ಬ ಯೋಧರು ನಮ್ಮ ನಾಳೆಗಳಿಗಾಗಿ ತಮ್ಮ ಈ ದಿನವನ್ನು ಬಲಿದಾನ ಮಾಡಿರುವುದು ಮರೆಯುವಂತಿಲ್ಲ.
ನಿಜ, ಕಾರ್ಗಿಲ್ ಇಡೀಯ ಕದನದಲ್ಲಿ 400 ಕ್ಕೂ ಹೆಚ್ಚು ಯೋಧರು ಈ ರಾಷ್ಟ್ರಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದಾರೆ. ಅದರಲ್ಲಿ ಕೆಲವರನ್ನಾದರೂ ನೆನಪು ಮಾಡಿಕೊಳ್ಳಲು ಈ ಅಪರೂಪದ ಬರಹ ಮಾಲಿಕೆ ಕಾರ್ಗಿಲ್ ಕದನ ವೀರರು 🙏
ವಂದೇ ಮಾತರಂ
✍️ಪ್ರಣವ ಭಟ್