ಭಾರತದ ಸಂಸ್ಕೃತಿಯ ಅನಾವರಣ ಇಂಡೋನೇಷ್ಯಾ ನೆಲದಲ್ಲಿ

ದೂರದ ಇಂಡೋನೇಷ್ಯಾ ಒಮ್ಮೆ ನೋಡಿದಾಗ ಹಿಂದು ಸಂಸ್ಕೃತಿ ಪರಂಪರೆಯ ಅನೇಕ ಕುರುಹುಗಳು ಇಂದಿಗೂ ಕಂಡುಬರುತ್ತದೆ. ಇಂಡೋನೇಷ್ಯಾದಲ್ಲಿ 15 ಕ್ಕೂ ಮಿಕ್ಕಿ ಗಣೇಶನ ವಿಗ್ರಹವನ್ನು ನೋಡಬಹುದು ಕೆಲವು ಕಡೆ ವಿಗ್ರಹಗಳ ಅವಶೇಷಗಳು ಮಾತ್ರ ಮ್ಯೂಸಿಯಂನಲ್ಲಿ ಕಾಣಸಿಗುತ್ತವೆ. ಅಷ್ಟೇ ಅಲ್ಲ ಅಲ್ಲಿಯ ಅನೇಕ ಬೌದ್ಧ ದೇವಾಲಯದಲ್ಲೂ ವಿಷ್ಣುವಿನ ವಾಹನ ಗರುಡನನ್ನು ಕಾಣಬಹುದು. 

ಇಂಡೋನೇಷ್ಯಾದಲ್ಲಿ ಸಂಸ್ಕೃತ ಭಾಷೆಯು ಸಮೃದ್ಧವಾಗಿ ಅವರ ಭಾಷೆಯಲ್ಲಿ ಕಂಡುಬರುತ್ತದೆ ಉದಾಹರಣೆಗೆ ಸಂಸ್ಕೃತ ಮತ್ತು ಇಂಡೋನೇಷಿಯನ್ ಎರಡರಲ್ಲೂ ಗಜಾ ಮತ್ತು ಗಜಾ, ಎರಡೂ ಆನೆ ಎಂದರ್ಥ. ಇಂಡೋನೇಷ್ಯಾದಲ್ಲಿ ಜೆಂಟಾ ಮತ್ತು ಸಂಸ್ಕೃತದಲ್ಲಿ ಘಂಟಾ ಎಂದು ಹೇಳುತ್ತಾರೆ ಅಷ್ಟೇ ಅಲ್ಲ ಗ್ರೆಹಣ ಎಂದು ಇಂಡೋನೇಷಿಯನ್ ಮತ್ತು ಗ್ರಹಣ ಸಂಸ್ಕೃತದಲ್ಲಿ ಹೇಳುತ್ತಾರೆ. ಮತ್ತು ಇಂಡೋನೇಷ್ಯಾ ಮತ್ತು ಸಂಸ್ಕೃತ ಎರಡರಲ್ಲೂ ಗ್ರಹ - ಮನೆ ಅಥವಾ ಮಹಲು, ಸಂಸ್ಕೃತ ಮತ್ತು ಇಂಡೋನೇಷಿಯನ್ ಎರಡರಲ್ಲೂ ಗುರು ಎಂದರೆ ಶಿಕ್ಷಕ, ಸಂಸ್ಕೃತ ಮತ್ತು ಇಂಡೋನೇಷಿಯನ್ ಎರಡರಲ್ಲೂ ಹಸ್ತ - ಕೈ ಹಾಗೂ Husada ಅಥವಾ Usada ಇಂಡೋನೇಶಿಯನ್ ಮತ್ತು Aushadha ಸಂಸ್ಕೃತದಲ್ಲಿ ಅರ್ಥ ಮೆಡಿಸಿನ್ ಇಂಡೋನೇಷ್ಯಾದಲ್ಲಿ ಇಂದ್ರ ಮತ್ತು ಸಂಸ್ಕೃತದಲ್ಲಿ ಇಂದ್ರಿಯಾ - ಇಂದ್ರಿಯ ಅಂಗ. ಇಂಡೋನೇಷ್ಯಾ ಮತ್ತು ಸಂಸ್ಕೃತ ಎರಡರಲ್ಲೂ ಇಸ್ತೇರಿ ಅಥವಾ ಇಸ್ಟ್ರಿ ಮತ್ತು ಸ್ಟ್ರೈ ಎಂದರೆ ಮಹಿಳೆ.ಎರಡೂ ಭಾಷೆಗಳಲ್ಲಿ ಜಗತ್ ಎಂದರೆ ಯೂನಿವರ್ಸ್ ಮತ್ತು ಎರಡರಲ್ಲೂ ಕಲಾ - ಸಮಯ
,ಕೆಂಕಾನಾ ಮತ್ತು ಕಾಂಚನಾ - ಚಿನ್ನ ,ಪರ್ಟಿವಿ ಮತ್ತು ಪೃಥ್ವಿ ಎಂರೆ ಭೂಮಿ.ಆಧುನಿಕ ಇಂಡೋನೇಷಿಯನ್ನರು ಇಲ್ಲಿಯವರೆಗೆ ಹೊಂದಿರುವ ಸಂಸ್ಕೃತ , ಮೌಲ್ಯಗಳು ನಮ್ಮ ಸಾಮಾನ್ಯ ಬೇರುಗಳು, ಸಂಸ್ಕೃತಿ ಮತ್ತು ನಾಗರಿಕತೆಗೆ ಸಾಕ್ಷಿಯಾಗಿದೆ.

ಇವುಗಳ ಮಧ್ಯೆ ನೆನಪಿಸಿಕೊಳ್ಳಲೇ ಬೇಕಾದ ವಿಷಯ ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಭಗವದ್ಗೀತೆಯ 5151 ನೇ ಹುಟ್ಟುಹಬ್ಬಕ್ಕೆ ಸಂಬಂಧಿಸಿದಂತೆ ತನಾಹ್ ಲಾಟ್ ದೇವಸ್ಥಾನದಲ್ಲಿ ದಾಖಲೆಯ ಘಟನೆ. ಬಹುಶಃ ಇಡೀಯ ಭಾರತದ ಹಿಂದುಗಳಿಗೆ ಮಾದರಿ ಹಾಗೂ ಶ್ರೇಷ್ಠ ಗ್ರಂಥ ಭಗವದ್ಗೀತೆಯನ್ನು ಜಗತ್ತಿಗೆ ನೀಡಿದ ಹೆಮ್ಮೆಯು ಭಾರತೀಯರದ್ದು ಹೌದು

8,000 ಕ್ಕೂ ಹೆಚ್ಚು ಬಲಿನೀಸ್ ಮೂಲಕ ಯುವತಿಯರು ಗೀತೆಯನ್ನು ಸಂಪೂರ್ಣವಾಗಿ ಜಪಿಸಲು ಒಟ್ಟುಗೂಡಿದರು. ಪವಿತ್ರ ಗ್ರಂಥದ ಎಲ್ಲಾ 18 ಅಧ್ಯಾಯಗಳನ್ನು ಜಪಿಸಲು  ಪೂರ್ಣ 3 ಗಂಟೆಗಳ ಕಾಲ ಕುಳಿತುಕೊಂಡರು, ಮುಗಿಯುವವರೆಗೂ ಎದ್ದೇಳುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಸಾಧಿಸಿದರು ಇದು ಇಡೀಯ ವಿಶ್ವಕ್ಕೆ ಅನುಕರಣೀಯವೇ ಬಹುಶಃ ಮುಂದೆ ಭಾರತದಲ್ಲೂ ಸಾವಿರಾರು ಜನ ಎಲ್ಲಾರೂ ಒಂದಾಗಿ ಒಂದು ಸ್ಥಳದಲ್ಲಿ ಕುಳಿತು ಭಗವದ್ಗೀತೆ ಓದುವ ಸಂದರ್ಭ ಬರಬೇಕು ಎಂಬ ಆಶಯ

ಪಠಣ ಪೂರ್ಣಗೊಂಡ ನಂತರ, ಮಹಾಕಾವ್ಯದಲ್ಲಿ ಕೃಷ್ಣ ಮತ್ತು ಅರ್ಜುನರ ಸಂವಾದಗಳಿಗೆ ಸಂಬಂಧಿಸಿದ ಹಲವಾರು ನೃತ್ಯಗಳು ಮತ್ತು ಪ್ರದರ್ಶನಗಳು ನಡೆಯಿತು ಬಹುಶಃ ಇದು ಇನ್ನಷ್ಟು ಭಗವದ್ಗೀತೆ ಅಧ್ಯಯನದತ್ತ ಕರೆದೊಯ್ಯುವ ಉತ್ತಮ ಮಾರ್ಗವಾಗಿದೆ. ಹಾಗೂ ಭಗವದ್ಗೀತೆ ಬರೀಯ ಹಿಂದೂ ಧರ್ಮಕ್ಕೆ ಸೀಮಿತವಾಗಿಲ್ಲ ಇಡೀಯ ವಿಶ್ವಕ್ಕೆ  ಜೀವನ ಕರ್ಮ ತಿಳಿಸುವ ಅಪರೂಪದ ಗ್ರಂಥ ಎಂಬುದು ಮರೆಯುವಂತಿಲ್ಲ.

ಬಲಿನೀಸ್‌ನ ದಯೆ, ಮುಗ್ಧತೆ, ಸ್ವಭಾವ, ಅವರ ದೃ ನಂಬಿಕೆ ಮತ್ತು ಭಕ್ತಿ, ಹಾಗೆಯೇ ಅವರ ಸಂಸ್ಕೃತಿಯ ಸಂರಕ್ಷಣೆ ಗಮನಾರ್ಹವಾದುದು ಮತ್ತು ಹೆಮ್ಮೆ ಪಡುವಂತ ಅನುಕರಣೀಯ ವಿಷಯ

ಈ ರೀತಿ ಎಲ್ಲೋ ಒಂದು ಕಡೆ ಭಾರತದ ಸಂಸ್ಕೃತಿಯು ವಿಶ್ವವ್ಯಾಪಿಯಾಗಿ ಯೋಗದಂತೆ ಸದಾ ಅದರ ವಿಸ್ತಾರವಾಗುತ್ತಲೇ ಇದೆ. ಹಾಗಾಗೇ ಇವುಗಳಿಗೆ ಅಂತ್ಯ ಎಂಬುವುದೇ ಇಲ್ಲ ಏಕೆಂದರೆ ಆಲದ ಮರದ ಬೇರುಗಳಂತೆ ನೂರಾರು ಕಡೆ ತನ್ನ ಬೇರುಗಳನ್ನು ಹಬ್ಬಿ ಗಟ್ಟಿಯಾಗಿ ಮಣ್ಣಿನೊಂದಿಗೆ ಬೆರೆತು ಎಂದು ನಾಶವಾಗದಂತೆ ನಿಂತು ಬಿಟ್ಟಿದೆ.

✍️ ಪ್ರಣವ ಭಟ್

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾರ್ಗಿಲ್ ಕದನವೀರರು - 7

ಕಾರ್ಗಿಲ್ ಕದನವೀರರು - 8